RSS

ನಿರ್ವಿಕಲ್ಪ

ಯುವಭಾರತ

ಆಂಗ್ಲರು ದೇಶ ತೊರೆದು 65 ಸಂವತ್ಸರಗಳೇ ಗತಿಸಿವೆ. ಹಿಂದಿರುಗಿ ನೋಡಿದರೆ ನಮ್ಮ ಸಾಧನೆ ನಗಣ್ಯ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ,ಮಡಿದ  ಸಹಸ್ರಾರು ರೋಚಕ ಕತೆಗಳು ನಮ್ಮ ಮುಂದಿವೆ. ಪರಾವಲಂಬಿ ಜೀವನ ನಮಗೆ ಬೇಕಿಲ್ಲ ಎಂದು ಸಿಡಿದು ನಿಂತು ಮಾತೆ ಭಾರತಿಯನ್ನು ದಾಸ್ಯದಿಂದ ಮುಕ್ತಿಗೊಳಿಸಿದ ಮಹನೀಯರ  ಆಸೆ ದೂರದೃಷ್ಟಿಯ ಚಿಂತನೆಗಳು ಗುರಿಗಳನ್ನು ಸಾಧಿಸಲಾಗಿದೆಯೆ? ಉತ್ತರ ನಕಾರಾತ್ಮಕ. ಹೌದು ಹಲವಾರು ಭವ್ಯ ಕನಸುಗಳೊಂದಿಗೆ ರೂಪುಗೊಂಡ, ಆಧುನಿಕ ಭಾರತದ ಚಿಂತನೆಗಳು ಇಂದೇನಾಗಿವೆ? ಇಂದಿನ ಯುವಜನತೆಯೂ, ಒಂದು ತಲೆಮಾರಿನ ಹಿಂದಿನ ವರ್ಗವೂ ಚಿಂತಿಸಬೇಕಾದ ಮಿಲಿಯನ್ ಡಾಲರ್  ಪ್ರಶ್ನೆ ಇದು.
ಕೇವಲ  ಆರು ದಶಕಗಳಲ್ಲಿ ಪುನಃ ಸ್ವಾತಂತ್ರ್ಯ ಸಂಗ್ರಾಮದಂತ:, ಅಥವಾ ಅದೇ ಮಾದರಿಯ ಹೋರಾಟವನ್ನು ಸಂಘಟಿಸಬೇಕಾಗಬಹುದುದೆಂದು ಅಂದು ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರೂ ಯೋಚಿಸಿರಲಿಕ್ಕಿಲ್ಲ. ಇಂದು ದೇಶಕ್ಕೊದಗಿರುವ ದುರ್ಗತಿಯೆಂದರೆ,ಜನಸಾಮಾನ್ಯರು “ಬ್ರಿಟಿಷ್ ಆಡಳಿತವೇ ಸೌಖ್ಯಕರವಾಗಿತ್ತು” ಎನ್ನುವ ಹಂತವನ್ನೂ ನಾವು  ಮೀರಿರುವುದು. ಇದೆಲ್ಲದರ ಮೂಲವನ್ನು ಅವಲೋಕಿಸಿದರೆ ಸಿಗುವ ಕಾರಣ ಕುಸಿಯುತ್ತಿರುವ ‘ಸಾಂಸ್ಕೃತಿಕ  ತಳಹದಿ’ ಮತ್ತು ‘ಕುರುಡು ಕಾಂಚಾಣ’.
ಆಂಗ್ಲ ಮಾದರಿ ಶಿಕ್ಷಣ ಇಂದು ಜನರಲ್ಲಿ ಎಷ್ಟು ವೈಜ್ನಾನಿಕ ಚಿಂತನೆಗಳನ್ನ ಬೆಳೆಸುತ್ತಿದೆಯೋ ಅಷ್ಟೇ ದುರಾಸೆ ಮತ್ತು ಬೇಜವಾಬ್ದಾರಿತನಗಳನ್ನೂ ಬಳುವಳಿಯಾಗಿ ನೀಡಿದೆ. ಹುಟ್ಟುವ ಮಗು ‘ಚಿನ್ನದ ಮೊಟ್ಟೆ ಇಡುವ  ಕೋಳಿ’ಯೇ ಆಗಬೇಕು ಎಂಬ ಪೋಷಕ ವರ್ಗವೂ, ತನ್ನ ಸುತ್ತಲಿನ ಜಗತ್ತನ್ನೇ ಮರೆತು ವಿಡಿಯೋ ಗೇಮ್,ಮೊಬೈಲ್ , social network ಗಳಲ್ಲಿ ಕಾಲಹರಣ ಮಾಡುವ ಯುವಜನತೆ ಒಂದು ಕಡೆಯಾದರೆ, ನಿರುದ್ಯೋಗ,ಬಡತನ,ಆಹಾರ ಸಮಸ್ಯೆಗಳು ಅಶಿಕ್ಷಿತ ಸಮಾಜ ಇವೆಲ್ಲವೂ ದೇಶದ ಅಭಿವೃದ್ಧಿಗೆ ಮಾರಕವಾಗಿವೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಆಶಾಕಿರಣಗಳು ಇಲ್ಲದಿಲ್ಲ. ದೇಶದ ಹಿತವನ್ನೇ ಬಯಸುವ,ಅದಕ್ಕಾಗಿ ಯಾವತ್ಯಾಗಕ್ಕಾದರು ಸರಿ ಎನ್ನುವ ದೇಶಪ್ರೇಮಿ ಯುವ ಪೀಳಿಗೆಯೂ ನಮ್ಮ ಮಧ್ಯದಲ್ಲಿದೆ.ಅಣ್ಣ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಯುವಜನತೆಯ ಸ್ವಯಂಪ್ರೇರಿತವಾದ ಪಾಲ್ಗೊಳ್ಳುವಿಕೆ ಇದಕ್ಕೊಂದು ಜೀವಂತ ಉದಾಹರಣೆ.
”ವಸುಧೈವ ಕುಟುಂಬಕಂ” ಎಂಬ ವಿಶ್ವ ಭ್ರಾತೃತ್ವ ಭಾವವನ್ನು ಬೋಧಿಸಿದ, ಯೋಗ,ಅಧ್ಯಾತ್ಮ,ಆಯುರ್ವೇದದ ಜೀವನ್ಮುಖಿ ಆದರ್ಶಗಳನ್ನು ಜಗತ್ತಿಗೆ ಸಾರಿ ಹೇಳಿದ ಈ ದೇಶ ಜಗದ್ಗುರುವಾಗಿ ಎಲ್ಲರನ್ನು ಮುನ್ನಡೆಸಲಿ ಎನ್ನುವ ಹಾರೈಕೆಗಳೊಂದಿಗೆ,

****************************************************************************************************

” ವಿಶ್ವ ಜಲ ದಿನ ಮತ್ತು ಜಲಕ್ಷಾಮ “(22nd march)

ವಿಶ್ವದ ಸಮಸ್ತ “ಜೀವಜಂತು” ಗಳಿಗೆ “ಜೀವತಂತು” ಈ ಜಲ. ೭೦೦ ಕೋಟಿ  ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮಾನವನಿರಬಹುದು, ಇತರೆ ಪ್ರಾಣಿ ಪಕ್ಷಿಗಳಿರಬಹುದು,ಇಲ್ಲವೇ ಸಸ್ಯ ಸಂಕುಲವಿರಬಹು ಇವೆಲ್ಲವುದಕ್ಕೂ ನೀರು ಅತ್ಯಮೂಲ್ಯ.

ವರ್ತಮಾನದಲ್ಲಿ ಸಂಶೋಧನೆಗಳು ಹೇಳಿರುವಂತೆ ಈ “ಕ್ಷೀರಪಥ ತಾರಾಗಣ”ದಲ್ಲಿ (milkyway galaxi ) ಭೂಮಿಮಾತ್ರ ಮಾನವ ವಾಸಯೋಗ್ಯ ತಾಣ  ಮತ್ತು  ಶುದ್ಧ ಸಿಹಿನೀರು ಸಿಗುವ ಏಕೈಕ ಗ್ರಹ. ಆದರೆ ಇದನ್ನು ಅರ್ಥೈಸಿಕೊಳ್ಳದ ನಾವು ನೀರನ್ನು ಯತೆಚ್ಚವಾಗಿ ಬಳಸಿ ನೈಸರ್ಗಿಕ ಸಂಪತ್ತನ್ನು ಹಾಳುಗೆಡವುತ್ತಿದ್ದೇವೆ. ನೈಸರ್ಗಿಕ ಸಂಪತ್ತನ್ನು ದುರ್ವಿನಿಯೋಗ ಮಾಡುತ್ತಿದ್ದೇವೆ.

ನಮಗೆ ೧ಕೆಜಿ ಗೋಧಿ  ಉತ್ಪಾದಿಸಲು ಸುಮಾರು 1500 ಲೀಟರ್ ನೀರು ಬೇಕಾದರೆ, ಗೋಮಾಂಸ 1kg ಉತ್ಪಾದಿಸಲು 10 ಪಟ್ಟು ಹೆಚ್ಚು ನೀರು ಬೇಕಾಗುತ್ತದೆ ! ಜಾನುವಾರುಗಳ ಮೇವಿನ ಬೆಳೆಗಳನ್ನು ಉತ್ಪಾದಿಸುವ ಕತ್ತರಿಸುವುದು ಮತ್ತು ಮಾಂಸ, ಹಾಲು ಮತ್ತು ಇತರ ಹಾಲಿನ ಉತ್ಪನ್ನಗಳ ಸಂಸ್ಕರಣೆಗೆ ನೀರು ದೊಡ್ಡ ಪ್ರಮಾಣದಲ್ಲಿ ಅಗತ್ಯ. (ಆಧಾರ: http://www.unwater.org ). ಸರ್ಕಾರ ತನ್ನ ಬಜೆಟ್ಟಿನಲ್ಲಿ ಎಷ್ಟೇ ಬೋಬ್ಬಿರಿದರೂ, ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ,ನಾವು ಮಾತ್ರ ಕಿವುಡರಾಗಿ ಕುಳಿತಿದ್ದೇವೆ. ಕೃಷಿ, ಕೈಗಾರಿಕೆ, ಹೈನುಗಾರಿಕೆ, ಮತ್ತು ನಮ್ಮ ದಿನನಿತ್ಯದ ಬಳಕೆಗಾಗಿ , ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ದಿನವೊಂದಕ್ಕೆ ಸಾವಿರಾರು ಲೀಟರ್ ನೀರು  ನಮ್ಮಿಂದ ವ್ಯಯಿಸಲ್ಪಡುತ್ತಿದೆ.

ಹಾಗಾದರೆ  ನೀರನ್ನು ಬಳಸದೆ ಬದುಕುವುದು ಹೇಗೆ? ಎಂಬ ಪ್ರಶ್ನೆ  ಉದ್ಭವಿಸಬಹುದು. ಹೌದು,ಜಲವಿರದೆ ಈ ಜೀವವಿರದು ಎಂಬುದು ಪ್ರತ್ಯಕ್ಷ  ಸತ್ಯ. ಆದರೆ  ಅದರ ಬಳಕೆಗೆ ಒಂದು ಇತಿ ಮಿತಿಯನ್ನು  ಗುರುತಿಸಬಹುದಲ್ಲವೇ?. ನೀರನ್ನು ವಿನಾಕಾರಣ ಪೋಲು ಮಾಡುವ ಬದಲು ಅದನ್ನು ಸದ್ವಿನಿಯೋಗಪಡಿಸಿಕೊಳ್ಳ ಬೇಕೆಂಬುದೇ ನಮ್ಮ ಉದ್ದೇಶವಾಗಬಾರದೇಕೆ?.

ಭೂಮಿಯ ಅಂತರಾಳದಲ್ಲಿರುವ ಜಲಮೂಲ ಖಾಲಿಯಾದರೆ ಉಳಿಯುವುದು ಸಾಗರದ ಉಪ್ಪುನೀರು ಮಾತ್ರ. ಅದು ಹೇರಳವಾಗಿ ಇದೆಯಾದರೂ, ಅದನ್ನು ಸಂಸ್ಕರಿಸಿ, ಶುದ್ಧಗೊಳಿಸಿ, ಸಿಹಿನೀರಾಗಿ ಪರಿವರ್ತಿಸುವುದು ಅಷ್ಟೇನೂ ಸುಲಭವಲ್ಲ  ಮತ್ತು ವೆಚ್ಚದಾಯಕವೂ ಹೌದು. ಅಂತ ಪರಿಸ್ಯ್ಹಿತಿ ಬಂದರೆ  ೧ ಲೀಟರ್ ನೀರಿನ ಬೆಲೆ ೧ ಲೀಟರ್ ಪೆಟ್ರೋಲ್ ಬೆಲೆಗಿಂತ ಜಾಸ್ತಿಯಾದೀತು!!.

ಅದೆಲ್ಲ ಹೋಗಲಿ, ನಮ್ಮ ವಿಜ್ಞಾನಿಗಳು ಬಿಟಿ ಬದನೆ,ಬಿಟಿ ಹತ್ತಿ, ಹೈಟೆಕ್ ಸಲಕರಣೆಗಳನ್ನು ಕಂಡುಹಿಡಿದಂತೆ, ನಮ್ಮ ಕಳ್ಳ ಡೈರಿಗಳು ಒಂದೂ ಹಸುವನ್ನೂ ಸಾಕದೆ ಸಾವಿರಾರು ಲೀಟರ್ ಹಾಲು(ಹಾಲಲ್ಲ ಹಾಲಾಹಲ ?) ಉತ್ಪಾದಿಸುವಂತೆ, ಮುಂದೊಂದುದಿನ “artificial water” ಉತ್ಪಾದನೆ ಆಗಬಹುದೆಂದು ಅಂದುಕೊಂಡಿರ? ಸಾವಿರಾರು ಲೀಟರ್ ಹಾಗಿರಲಿ, ೧ ತೊಟ್ಟು  ನೀರನ್ನೂ  ಇದುತನಕ ಯಾರಿಂದಲೂ ಉತ್ಪಾದಿಸಲು ಸಾಧ್ಯವಾಗಿಲ್ಲ ಎಂದರೆ ನಂಬಲೇಬೇಕು!!

ಇದೆಲ್ಲವುದರ ಅರಿವುಗಳ ನಡುವೆ, ಮತ್ತದೇ ಗೊಣಗಾಟಗಳ ನಡುವೆ, ಇನ್ನೊಂದು “ವಿಶ್ವ ಜಲ ದಿನ” ಸದ್ದಿಲ್ಲದೇ ಆಗಮಿಸಿ, ಸರಿದು ಹೋಗುತ್ತಿದೆ. ಹೌದು ಇಂದು ಮಾರ್ಚ್ ೨೨ “ವಿಶ್ವ ಜಲ ದಿನ”. ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಇದರ ಮಹತ್ವವನ್ನು ಸಾರಿ ಹೇಳುವ, ಅರ್ಥಮಾಡಿಸುವ ಅಗತ್ಯವಿದೆ. ಈ ನೈಸರ್ಗಿಕ ಸಂಪತ್ತುಗಳು ನಮ್ಮ ಭವಿಷ್ಯದ ನಾಗರೀಕತೆಯ ಸೊತ್ತು ಎನ್ನುವುದನ್ನೂ ತಿಳಿಸಬೇಕಿದೆ. ಒಬ್ಬ ಸಾಧಾರಣ ನಾಗರೀಕನಾಗಿ “ಜಲ ಸಂಪತ್ತನ್ನು ಉಳಿಸಲು” ನಾವೇನು ಮಾಡಬಹುದೆಂದು ಅರಿಯುವ ಕಾರ್ಯವಾಗಬೇಕಿದೆ.

ಜಗತ್ತಿನ ದೊಡ್ಡಣ್ಣ ಭಯೋತ್ಪಾದನೆ ನಿರ್ಮೂಲನೆಯ ಹೆಸರಲ್ಲಿ, ಸ್ವಾರ್ಥ ಸಾಧನೆಗಾಗಿ , ತೈಲ ನಿಕ್ಷೇಪಗಳನ್ನು ಕೊಳ್ಳೆ ಹೊಡೆಯಲು, ಮಹಾಯುದ್ದಗಳನ್ನು , ಭೀಕರ ಕಾದಾಟಗಳನ್ನು ನಡೆಸಿದಂತೆ, ಮುಂದೊಂದು ದಿನ ಜಗತ್ತಿನ ಎಲ್ಲ ದೇಶಗಳೂ ಹನಿ ನೀರಿಗಾಗಿ ಹೊಡೆದಾಡಬಹುದು. ಜಲಕ್ಷಾಮ ಎಂಬುದು ಮನುಕುಲದ ಕ್ಷಯವಾಗುವುದಕ್ಕೆ ದಾರಿಯಾಗಬಹುದು.ಅಂತ:ದಿನಗಳು ಬರುವಮೊದಲೇ ಎಚ್ಚೆತ್ತುಕೊಂಡು, ಕಾರ್ಯತತ್ಪರವಾಗುವುದು ಜಾಣತನವಲ್ಲವೇ?

Advertisements
 

ನಿಮ್ಮ ಪ್ರತಿಕ್ರಿಯೆಗಳು

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
ಅಸೀಮಾ ಕನ್ನಡ ಮಾಸಿಕ

ಕನ್ನಡದ ಏಕೈಕ ರಾಷ್ಟ್ರೀಯ ವಿಚಾರಗಳ ಮಾಸಿಕ. ಇಪ್ಪತ್ತು ವರ್ಷಗಳಿಂದ ಪ್ರಕಟಿತ. ರಾಷ್ಟ್ರೀಯ ವಿಚಾರಗಳು ವೈಚಾರಿಕ ನೆಲೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು ಪ್ರಕಟವಾಗುತ್ತಿವೆ. ಇದುವರೆಗೆ ನಾಡಿನ ಖ್ಯಾತ ಚಿಂತಕರನೇಕರ ಲೇಖನಗಳು "ಅಸೀಮಾ"ದಲ್ಲಿ ಪ್ರಕಟವಾಗಿವೆ. ಸಂಶೋಧನೆ, ವಿಚಾರಕ್ಕೆ ಹಚ್ಚುವ ಬರಹಗಳಿಗೆ ಆದ್ಯತೆ.

ಸಿ.ಎಸ್.ಎಲ್.ಸಿ. CSLC

Centre for the Study of Local Cultures at Kuvempu University

ಭಾವ ಕಿರಣ

Just another WordPress.com weblog

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಮೂರು ಊರಿನ ಸುತ್ತ...

ಶಿಶಿರ ಹೆಗಡೆ

Madannoor

Al-valiyyu shaheed fee sabeel (RA)

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

jamunarani

Just another WordPress.com site

Mangalur News

" ಸತ್ಯ ಮೇವ ಜಯತೇ "

rajendrakumarraikodi

ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾನು

ನಿಲುಮೆ

ಎಲ್ಲ ತತ್ವದ ಎಲ್ಲೆ ಮೀರಿ...!

Akash's Photo-Blog

A picture is worth a thousand words... A photo blog is both.

ಕಾಲದ ಕನ್ನಡಿ

ಸತತ ಪಾರದರ್ಶಕತೆ

ಒಂದಿಷ್ಟು ಕನಸು

ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ "ಬದುಕು"

ಕುಂದಾಪ್ರ ಕನ್ನಡ

ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ...

ರಾ ಗ ನೌ ಕೆ

ಎದೆಯಾಳದಿಂದೆದ್ದು ನಭನೀಲಿಗೇರಿದ್ದು..

ನೀಲಾಂಜಲ

ನಾನು, ನೀವು ಮತ್ತು ನನ್ನ ಯೋಚನೆಗಳು

ಕುಂಭಾಶಿ ಹುಡುಗ

ರೆಕ್ಕೆ ಬಿಚ್ಚಿದ ಸಂಭ್ರಮ..!

ಸತ್ಯದ ಅನಾವರಣ ಮತ್ತು ನಿರಂತರ ಹುಡುಕಾಟ

%d bloggers like this: