RSS

Monthly Archives: ಮಾರ್ಚ್ 2012

ಆಂತರ್ಯ

ಈ ದಿನದ ನಸುಕಿನಲಿ
ಮತ್ತೊಂದು ಕನಸಿನಲಿ
ನಗು ಮುಖವೊಂದರಾ ಸೌಂದರ್ಯ !

ಈ ಮುಂಜಾವಿನಲಿ
ಸೋಕುವಾ ತಂಗಾಳಿಯಲಿ
ಆ ಕೋಮಲ ಸ್ಪರ್ಶದಾ ಮಾಧುರ್ಯ !

ನಸುಕಿನ ನಶೆಯಲ್ಲಿ
ಹೊಂಗಿರಣದಾಟದಲಿ
ಮರೆಯದಾ ನೆನಹುಗಳ ಬಾಂಧವ್ಯ !

ಸುಂದರ ಇಳೆಯಲ್ಲಿ
ಭಾಮಿನಿಯ ಜೊತೆಯಲ್ಲಿ
ಸ್ವರ್ಗವೇ ಧರೆಗಿಳಿದ ಆಂತರ್ಯ!

(pic: internet)

Advertisements
 
1 ಟಿಪ್ಪಣಿ

Posted by on ಮಾರ್ಚ್ 27, 2012 in ಭಾವ ಲಹರಿ

 

ನಿನಗಾಗಿ

ಕಾದಿಹನು ಸುಂದರ
ನಾಚಿಹನು ಚಂದಿರ
ಚಲುವೆ ಎಲ್ಲಾ ನಿನಗಾಗಿ

ಅರಳಿದೆ ಸುಮವು
ಸೂಸಿದೆ ಘಮವು
ಚಲುವೆ ಎಲ್ಲಾ ನಿನಗಾಗಿ

ಇಣುಕಿದನು ಅರುಣ
ಅಳುತಿಹನು ವರುಣ
ಚಲುವೆ ಎಲ್ಲಾ ನಿನಗಾಗಿ

ನಗಬಾರದೇ ನೀನೊಮ್ಮೆ ಇತ್ತ  ನೋಡಿ?
ನಗಿಸಲಾರೆಯ ಒಮ್ಮೆ ಮಾತನಾಡಿ?

ಕಾಡುತಿದೆ ಕೆಂಪುತೋಟದ ನೆನಪು
ನಿನ್ನಾ ವಯ್ಯಾರ ಒನಪು!

ಭೋರ್ಗರೆಯುತ್ತಿದೆ ಇಂದೆನ್ನ ಹೃದಯ ತುಂಬಿ,
ನಾನಾಗಬಾರದೆ ಕೆಂದುಟಿಯ ಮಕರಂದ ಹೀರುವಾ ದುಂಬಿ.

 

ಸನ್ಯಾಸ

Image

ಹುಡುಕಿ ಹೊರಟಿದ್ದು ನೆಮ್ಮದಿ,
ದೊರೆಯದಿದೆಂದೂ ಸಂಸಾರದಿ.
ಅದಕೆ ಹೇಳಿದರೇನು ಬುದ್ಧ,ಶಂಕರ,ವ್ಯಾಸ?  
ಜಗದಿ ಎಲ್ಲಕಿಂತ ಮೇಲೆಂದು, ಆ ಸನ್ಯಾಸ?

 

ಪ್ರಿಯಸಖ (ಕವನ ಸರಣಿ)

ಪ್ರಿಯಸಖ (ಕವನ ಸರಣಿ).

 

ಒಂಟಿತನ

 

ಭಾವ ನಿರ್ಜೀವ
ಒಂಟಿ ಈ ಜೀವ
ಬರಿದೆ ಬತ್ತಲಾಯ್ತು ಮನಸು
ನುಚ್ಚು ನೂರಾದ ಕನಸು?

ಹಗಲು ಭೀಕರ
ಇರುಳು ದುರ್ಭರ
ದಿನವು ಭಾವನೆಗಳಬ್ಬರ
ಉರಿವುದುದರ
ಅದರುವುದಧರ
ಹೃದಯ ಯಾತನ ಸಾಗರ.

ಬಿಸಿಯುಸಿರು..
ಜೊತೆ,
ಧುಮ್ಮಿಕ್ಕುವಾ ಅಶ್ರುಧಾರೆ,
ಇದೆಲ್ಲದರಾ ನಂತರ.

ನನಗೆ ನೀನು   
ನಿನಗೆ ನಾನು
ಎಂಬ ನವಿರಾದ ಭಾವ,
ಅಗಲುವಾಗ ತರಬಹುದೇ
ಇನ್ನಿಲ್ಲದಂತಹ ನೋವ?

ನಿನಗೆ ನೀನೆ ಎಂಬ ಸತ್ಯಕೆ
ದೊರಕಿಹುದಿಂದು ಮರುಜೀವ !!

 

 

ಅಂತರಂಗ

 

 

 

ಓ ನನ್ನ ಕನಸೇ,
ನನ್ನ ಮೇಲೆ ಮುನಿಸೆ?

ಓ ನನ್ನ ಒಲವೆ ,
ನನ್ನೊಡನೆಯೂ ಛಲವೇ?

ಮೀಟಿದೆ ಮನವು ಮೌನ ತರಂಗ,
ಅರಿಯದಾದೆ ನೀ ನನ್ನಂತರಂಗ !!

ಕಾದಿದೆ ತನುಮನ ನಿನಗಾಗಿ,
ಬರಲಾರೆಯಾ ನೀ ನನಗಾಗಿ ?

ಕಾಡುತಿದೆ ಕಣ್ಣ ಕುಡಿಯಂಚಿನ ನೋಟ,
ಇಬ್ಬನಿಯ ರಾತ್ರಿಯ ಮಧುರ ಮಬ್ಬಿನಾಟ !!

ಕಾಯುತಿಹೆ ಕೇಳಲು ನಿನ್ನ ಸವಿ ಸೊಲ್ಲು ,
ನೀನೆ ತುಂಬಿರುವೆ ನನ್ನುಸಿರ ಕಣ ಕಣದಲ್ಲೂ …

 

 

 

 

ನನ್ನವಳು

Image

 

ಅವಳು ನನ್ನವಳು
ಅವಳು ನನ್ನವಳು
ಅದೇ ಜಿಂಕೆ ಕಣ್ಣವಳು.

ಅವಳು ನನ್ನವಳು
ಅವಳು ನನ್ನವಳು
ಅದೇ ಉದ್ದ ಜಡೆಯವಳು.

ಅವಳು ನನ್ನವಳು
ಅವಳು ನನ್ನವಳು
ಮಗುವಿನಂತಃ ಮನದವಳು.

ಅವಳ ಪುಟ್ಟ ಹೃದಯದಲ್ಲಿ
ನನಗೂ ಜಾಗ ಕೊಟ್ಟವಳು.

ಅದೇ ಕಣ್ಣ ನೋಟದಲ್ಲಿ
ನನ್ನ ಹೃದಯವ ಕದ್ದವಳು,

ಅದೇ ಮುಗ್ದ ನಗುವಿನಲ್ಲಿ
ನನ್ನ ಮನವನು ಗೆದ್ದವಳು

ಪ್ರೇಮವೆಂಬ ಪಾಶದಲ್ಲಿ
ನನ್ನ ಭಂದಿಸಿ ಇಟ್ಟವಳು!!

 
 
ಅಸೀಮಾ ಕನ್ನಡ ಮಾಸಿಕ

ಕನ್ನಡದ ಏಕೈಕ ರಾಷ್ಟ್ರೀಯ ವಿಚಾರಗಳ ಮಾಸಿಕ. ಇಪ್ಪತ್ತು ವರ್ಷಗಳಿಂದ ಪ್ರಕಟಿತ. ರಾಷ್ಟ್ರೀಯ ವಿಚಾರಗಳು ವೈಚಾರಿಕ ನೆಲೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು ಪ್ರಕಟವಾಗುತ್ತಿವೆ. ಇದುವರೆಗೆ ನಾಡಿನ ಖ್ಯಾತ ಚಿಂತಕರನೇಕರ ಲೇಖನಗಳು "ಅಸೀಮಾ"ದಲ್ಲಿ ಪ್ರಕಟವಾಗಿವೆ. ಸಂಶೋಧನೆ, ವಿಚಾರಕ್ಕೆ ಹಚ್ಚುವ ಬರಹಗಳಿಗೆ ಆದ್ಯತೆ.

ಸಿ.ಎಸ್.ಎಲ್.ಸಿ. CSLC

Centre for the Study of Local Cultures at Kuvempu University

ಭಾವ ಕಿರಣ

Just another WordPress.com weblog

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಮೂರು ಊರಿನ ಸುತ್ತ...

ಶಿಶಿರ ಹೆಗಡೆ

Madannoor

Al-valiyyu shaheed fee sabeel (RA)

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

jamunarani

Just another WordPress.com site

Mangalur News

" ಸತ್ಯ ಮೇವ ಜಯತೇ "

rajendrakumarraikodi

ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾನು

ನಿಲುಮೆ

ಎಲ್ಲ ತತ್ವದ ಎಲ್ಲೆ ಮೀರಿ...!

Akash's Photo-Blog

A picture is worth a thousand words... A photo blog is both.

ಕಾಲದ ಕನ್ನಡಿ

ಸತತ ಪಾರದರ್ಶಕತೆ

ಒಂದಿಷ್ಟು ಕನಸು

ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ "ಬದುಕು"

ಕುಂದಾಪ್ರ ಕನ್ನಡ

ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ...

ರಾ ಗ ನೌ ಕೆ

ಎದೆಯಾಳದಿಂದೆದ್ದು ನಭನೀಲಿಗೇರಿದ್ದು..

ನೀಲಾಂಜಲ

ನಾನು, ನೀವು ಮತ್ತು ನನ್ನ ಯೋಚನೆಗಳು

ಕುಂಭಾಶಿ ಹುಡುಗ

ರೆಕ್ಕೆ ಬಿಚ್ಚಿದ ಸಂಭ್ರಮ..!

ಸತ್ಯದ ಅನಾವರಣ ಮತ್ತು ನಿರಂತರ ಹುಡುಕಾಟ

%d bloggers like this: