RSS

Category Archives: ಪ್ರಿಯಸಖ (ಕವನಸರಣಿ)

ಪ್ರಿಯಸಖ ಕವನ ಸರಣಿಯು ಕೃಷ್ಣನಿಗಾಗಿ ಪರಿತಪಿಸಿದ, ಹಂಬಲಿಸಿದ ಮನಸುಗಳ ಚಿತ್ರೀಕರಣದ ಒಂದು ಪ್ರಯತ್ನ. ಇಲ್ಲಿ ರಾಧೆಯೂ, ಗೋಪಿಕೆಯರು, ಕೃಷ್ಣನ ಭಾಮೆಯರೂ ಬರಬಹುದು. ಅವರಜೊತೆ ಸುಧಾಮ, ಅರ್ಜುನಾದಿಗಳು ಸೇರಿಕೊಳ್ಳಬಹುದು. ಕಲ್ಪಿತ ಸನ್ನಿವೇಶಗಳನ್ನು ಕವನರೂಪದಲ್ಲಿ ಅಭಿವ್ಯಕ್ತಿ ಗೊಳಿಸಲು ಯತ್ನಿಸಿದ್ದೇನೆ.
ಒಮ್ಮೆ ನೀವೂ ಸಂದರ್ಭಾನುಸಾರ ಪರಕಾಯ ಪ್ರವೇಶಮಾಡಿ ಓದಿನೋಡಿ. ಹೇಗಿದೆ ಹೇಳಿ. :)

ಬೃಂದಾವನ

(ನಾವು ಒಮ್ಮೊಮ್ಮೆ ಜೀವನ ಬಹುಮುಖ್ಯ ವಸ್ತುವನ್ನು ಕಳೆದುಕೊಂಡಾಗ,  ಎಲ್ಲ ಘಟನೆಗಳಲ್ಲೂ , ಆ  ಕಳೆದು ಹೋದ ಅಮೂಲ್ಯ ವಸ್ತುವಿನ ಶೋಧವೇ ಮುಖ್ಯವಾಗಿಬಿಡುತ್ತದೆ. ಕಳೆದು ಹೋದ ವ್ಯಕ್ತಿಯ ಮೌಲ್ಯ ಅರಿವಾಗುವುದು ಅಗಲಿಕೆಯಲ್ಲಿ ಮಾತ್ರ !!. ರಾಧೆಯ ಮನವೂ ಕೃಷ್ಣ ಕಾಣದಿದ್ದಾಗ ಪರಿತಪಿಸುತ್ತಿತ್ತೆ? ಕೃಷ್ಣನ ಅಗಲಿಕೆಯ ನೋವಿನಿಂದ ಬಳಲಿರುವ ರಾಧೆಯ ಮನಸ್ಸು ಎಲ್ಲೆಲ್ಲೂ ಕೃಷ್ಣ ರೂಪವನ್ನೇ ಹುದುಕುತ್ತಿತ್ತೆ?. ಇಲ್ಲಿದೆ ರಾಧೆಯ ಮನಕ್ಕೊಂದು ಅಕ್ಷರ ರೂಪ.)

ನೀಲಾಕಾಶದಿ,
ನೀಲ ಮೇಘ ಶ್ಯಾಮನೋಮ್ಮೆ ಕಾಣಬಾರದೆ?

ಹೃದಯಾಕಾಶದಿ,
ಚಿತ್ತಾಪಹಾರಿಯ ಚಿತ್ರವೊಮ್ಮೆ ಮೂಡಬಾರದೆ?

ನೀಲ ನೆತ್ರನ ನಗುವು ಇಂದೇಕೋ ಕೇಳದಾಗಿದೆ,
ಮೊರೆತ ಮಾತ್ರ ಎಂದಿನಂತೆ ಹಾಗೆ ಉಳಿದಿದೆ !!

ನಗುವಿನಲ್ಲೂ ಅಳುವಿನಲ್ಲೂ ನಿತ್ಯವರ್ಣನೆ,
ಮನವು ಬಯಸುತಿಹುದು ಮತ್ತೆ ಅವನ ಬಣ್ಣನೆ !!

ಗಿರಿಕಂದರ ಶಿಖರಗಳಲೂ  ಅವನ ರೂಪವೇ,
ಈ ಮುಗ್ಧ ಮಗುವ ಮೇಲೆ ಅವಗೆ ಕೋಪವೇ?

ಈ ಸ್ನಿಗ್ಧ ಚಲುವೆಲ್ಲ ಅವನದಲ್ಲವೇ ?
ಚಲುವನಿತ್ತ ಇನಿಯ ಮತ್ತೆ ಅವನೇ ಅಲ್ಲವೇ?

ಅಂದಮೇಲೆ ಮತ್ತೆ ಗೋಪ ಬಂದೆ ಬರುವನು,
ಬೃಂದಾವನಕೆ ಮತ್ತೆ ನಗುವ ತಂದೆ ತರುವನು !!   

Advertisements
 

ಮುನಿಸು

Image

(ಕೃಷ್ಣ ರಾಧೆಯನ್ನು ಬಹುದಿನಗಳ ನಂತರ ಸಂಧಿಸಿದಾಗ, ಆಕೆ ಕೋಪಿಸಿಕೊಂಡು, ತೋರುವ ಹುಸಿಮುನಿಸು, ಮತ್ತು ಆತನ ಸಾನ್ನಿಧ್ಯದಲ್ಲಿ ಮತ್ತೆ ಶರಣಾಗುವ ಪರಿ)….

ಕರೆದರೂ ಬರುತ್ತಿಲ್ಲ
ನೀನನ್ನ ಸಖನಲ್ಲ
ಹೋಗು ಹೊಗೆನ್ನ ತೊರೆದು.

ಬಣ್ಣದಾ ಮಾತೆಲ್ಲ
ಹುಸಿ ಪ್ರೇಮ ಬೇಕಿಲ್ಲ
ಕುಳಿತಿರು ನೀ ದೂರಸರಿದು.

ಪ್ರೀತಿಯ ಮಾತಿಲ್ಲ
ಪ್ರೇಮದಾ ಶೃತಿಯಿಲ್ಲ
ಮನವಾ ಯ್ತು ಇಂದೇಕೋ ಬರಿದು.

ನಕ್ಕರೂ ನಗುತಿಲ್ಲ
ಅಕ್ಕರೆಯು ಇನಿತಿಲ್ಲ
ನೀನಲ್ಲ ನನ್ನ ಹರಿಯು.

ನೀನಿರುವೆ ಮನದಲ್ಲಿ
ನನ್ನಾತ್ಮ ಪ್ರಾಣದಲಿ
ನೀನೇನೆ ಈ ಜೀವ ಗತಿಯು.

ಹುಸಿಮುನಿಸ ನಂಬದಿರು
ತೊರೆದೆನ್ನ ಪೋಗದಿರು
ನಾನಲ್ಲ ನಿನ್ನ ಅರಿಯು.

 

ಕಂಪನ

      

(ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ,ಕೃಷ್ಣಎದುರಿನಲ್ಲೇ ಇದ್ದರೂ ಪ್ರೇಮವನ್ನು ಅವನಲ್ಲಿ  ನಿವೇದಿಸಲಾರದೆ, ಸಖಿಯಲ್ಲಿ ತನ್ನ ಭಾವವನ್ನು   ವ್ಯಕ್ತಪಡಿಸುವ ಪರಿ…..)

ಹೊರಗೆ ತಂಗಾಳಿ
ಒಳಗೆ ಬಿರುಗಾಳಿ
ಈ ಮನವನೆಲ್ಲಿ ಕಟ್ಟಿಡಲೇ ನಾನು?

ಹೃದಯ ಆಸೆಯ ಕೂಪ
ಭುವಿಯು ಬೆಂದಿಹ ತಾಪ
ಶೃಂಗಾರ ಸಿಹಿಗನಸ ಬಚ್ಚಿ  ಇಡಲೇನು?

ನಭದಿ ನಗುವ ಪೂರ್ಣ
ಇದಿರು ನೀಲವರ್ಣ
ಧುಮ್ಮಿಕ್ಕುವಾಸೆಯಾ ಹೊಸಕಿ ಹಾಕಲೇನು?

ಸದಾ ಅವನ ಧ್ಯಾನ
ನೀನೆ ನನ್ನ ಪ್ರಾಣ
ತುಟಿ ಬಿರಿದು ನಗುವೊಂದ ಸೂಸಲಾರೆಯೇನು?

ಬರಿದು ಬರಿದೆ ಮುನಿಸು
ಅದೇ ತುಂಟ ಮನಸು
ನನ್ನೊಮ್ಮೆ ಬರಸೆಳೆದು ತಬ್ಬಿಹಿಡಿಯಬಾರದೇನು?

ನಿತ್ಯ ಹಾಸ ವದನ
ಇವನೇ ನನ್ನ ಮದನ
ಬಿಗಿದಪ್ಪಿ ಮುತ್ತಿಕ್ಕಿ ಸಂತೈಸನೆನು?

 
 
ಅಸೀಮಾ ಕನ್ನಡ ಮಾಸಿಕ

ಕನ್ನಡದ ಏಕೈಕ ರಾಷ್ಟ್ರೀಯ ವಿಚಾರಗಳ ಮಾಸಿಕ. ಇಪ್ಪತ್ತು ವರ್ಷಗಳಿಂದ ಪ್ರಕಟಿತ. ರಾಷ್ಟ್ರೀಯ ವಿಚಾರಗಳು ವೈಚಾರಿಕ ನೆಲೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು ಪ್ರಕಟವಾಗುತ್ತಿವೆ. ಇದುವರೆಗೆ ನಾಡಿನ ಖ್ಯಾತ ಚಿಂತಕರನೇಕರ ಲೇಖನಗಳು "ಅಸೀಮಾ"ದಲ್ಲಿ ಪ್ರಕಟವಾಗಿವೆ. ಸಂಶೋಧನೆ, ವಿಚಾರಕ್ಕೆ ಹಚ್ಚುವ ಬರಹಗಳಿಗೆ ಆದ್ಯತೆ.

ಸಿ.ಎಸ್.ಎಲ್.ಸಿ. CSLC

Centre for the Study of Local Cultures at Kuvempu University

ಭಾವ ಕಿರಣ

Just another WordPress.com weblog

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಮೂರು ಊರಿನ ಸುತ್ತ...

ಶಿಶಿರ ಹೆಗಡೆ

Madannoor

Al-valiyyu shaheed fee sabeel (RA)

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

jamunarani

Just another WordPress.com site

Mangalur News

" ಸತ್ಯ ಮೇವ ಜಯತೇ "

rajendrakumarraikodi

ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾನು

ನಿಲುಮೆ

ಎಲ್ಲ ತತ್ವದ ಎಲ್ಲೆ ಮೀರಿ...!

Akash's Photo-Blog

A picture is worth a thousand words... A photo blog is both.

ಕಾಲದ ಕನ್ನಡಿ

ಸತತ ಪಾರದರ್ಶಕತೆ

ಒಂದಿಷ್ಟು ಕನಸು

ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ "ಬದುಕು"

ಕುಂದಾಪ್ರ ಕನ್ನಡ

ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ...

ರಾ ಗ ನೌ ಕೆ

ಎದೆಯಾಳದಿಂದೆದ್ದು ನಭನೀಲಿಗೇರಿದ್ದು..

ನೀಲಾಂಜಲ

ನಾನು, ನೀವು ಮತ್ತು ನನ್ನ ಯೋಚನೆಗಳು

ಕುಂಭಾಶಿ ಹುಡುಗ

ರೆಕ್ಕೆ ಬಿಚ್ಚಿದ ಸಂಭ್ರಮ..!

ಸತ್ಯದ ಅನಾವರಣ ಮತ್ತು ನಿರಂತರ ಹುಡುಕಾಟ

%d bloggers like this: